ತ-		
ಕನ್ನಡ ವರ್ಣಮಾಲೆಯಲ್ಲಿನ ವರ್ಗೀಯ ವ್ಯಂಜನ ಶ್ರೇಣಿಯಲ್ಲಿ ತ ವರ್ಗದ ಮೊದಲ ಅಕ್ಷರ.  ಅಲ್ಪಪ್ರಾಣ.  ಅಶೋಕನ ಕಾಲದಲ್ಲಿ ಎರಡು ಸರಳರೇಖೆಗಳಿಂದ ಕೂಡಿದ ಈ ಅಕ್ಷರ ಕ್ರಿ. ಶ. ಎರಡನೆಯ ಶತಮಾನದಲ್ಲಿ ಅಗಲವಾಗಿಯೂ ದುಂಡಾಗಿಯೂ ಪರಿವರ್ತನೆ ಹೊಂದುತ್ತದೆ.  ಕದಂಬ ಕಾಲದಲ್ಲಿ ಬಲಭಾಗದ ರೇಖೆ ಸ್ವಲ್ಪ ಎಡಗಡೆಗೆ ಬಾಗುತ್ತದೆ.  ಒಂಭತ್ತನೆಯ ಶತಮಾನದಲ್ಲಿ, ಈ ಬಾಗಿದ ರೇಖೆ ಇನ್ನೂ ಉದ್ದವಾಗಿ ದುಂಡಾಗುತ್ತದೆ.  ಹದಿಮೂರನೆಯ ಶತಮಾನದ ಶಾಸನಗಳಲ್ಲಿ ಇದೇ ಪ್ರವೃತ್ತಿ ಮುಂದುವರಿಯುತ್ತದೆ.  ಈ ರೂಪ ವಿಶೇಷ ಬದಲಾವಣೆಯಿಲ್ಲದೆ ವಿಜಯನಗರ ಮತ್ತು ಅದರ ಮುಂದಿನ ಕಾಲಗಳಲ್ಲಿ ಉಳಿಯುತ್ತದೆ.  ಈ ಅಕ್ಷರದಂತ್ಯ ಅಘೋಷ ಸ್ಪರ್ಶ ಧ್ವನಿಯನ್ನು ಸೂಚಿಸುತ್ತದೆ.			(ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ